ಕ್ಯೂರಿ	
ಏಕಿರಣಪಟುತ್ವದ (ರೇಡಿಯೊ ಆಕ್ಟಿವಿಟಿ) ಪರಿಮಾಣವನ್ನು ಅಳೆಯಲು ಬಳಸುವ ಒಂದು ಏಕಮಾನ.  ಮೇರಿ ಕ್ಯೂರಿಯ ಗೌರವಾರ್ಥ ಈ ಏಕಮಾನಕ್ಕೆ ಕ್ಯೂರಿ ಎಂಬ ಹೆಸರನ್ನು ಇಡಲಾಗಿದೆ.  ಒಂದು ಸೆಕೆಂಡಿಗೆ 3.7 ಘಿ 1010 ವಿಘಟನೆಗಳನ್ನು (ಡಿಸ್-ಇಂಟೆಗ್ರೇಷನ್ಸ್) ಅನುಭವಿಸುತ್ತಿರುವ ಒಂದು ವಿಕಿರಣಪಟು ವಸ್ತುವಿನ ಪರಿಮಾಣ ಒಂದು ಕ್ಯೂರಿ.  1-ಕ್ಯೂರಿ ಆಕರದಲ್ಲಿನ ವಿಕಿರಣಪಟು ಪರಮಾಣುಗಳ ಸಂಖ್ಯೆ ಖ/(.  ಇಲ್ಲಿ ಖ=3.7 ಘಿ 1010 ವಿಘಟನೆಗಳು ಸೆಕೆಂಡಿಗೆ; (. ಆಕರದಲ್ಲಿರುವ ವಿಶಿಷ್ಟ ವಿಕಿರಣಪಟು ವಸ್ತುವನ್ನು ಕುರಿತ ವಿಘಟನ ಸ್ಥಿರಾಂಕ. 	   							  *
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ